ಹಗಲಿಗೊಂದಷ್ಟು - ಇರುಳಿಗಿನ್ನೊಂದಿಷ್ಟು ನಲ್ನುಡಿಗಳು.....❤❤❤
ಬೆಳಗೆಂದರೆ - ಒಲವು ಎದೆಯ ಅಕ್ಷರವಾಗಿ ಕೊನರಿ ಕೊರಳ ಹಾಡಾಗಿ ಬೆಳೆವ ಭರವಸೆಯ ಬೆಚ್ಚನೆ ಬೆಳಕಿನ ಗೂಡು...
ಶುಭೋದಯ...☺
:::
ಇರುಳ ಹಾಸಿನ ಮೇಲೆ ನಗೆಯ ದಿಬ್ಬಣದ ಕನಸಿನ ಚಿತ್ತಾರವ ನೇಯುತ್ತಾ ಬರುವ ಭವ್ಯತೆಯ ಬೆಳಕ ಉತ್ಸವಕೆ ಕಾತರದ ನಿರೀಕ್ಷೆಯಲಿ ಕಂಗಳಿವು ನಿದಿರೆಯ ಮುದ್ದಿಸಲಿ...
ಶುಭರಾತ್ರಿ...☺
:::
ಗರ್ಭದಲ್ಲಿ ಹೊಸ ಕನಸ ಹಾಡೊಂದನು ಹೊತ್ತು ಮತ್ತೊಂದು ಬೆಳಗಾಯಿತು...
ಬದುಕ ಋಣ ಬಲು ದೊಡ್ಡದು...☺
:::
ಇರುಳ ಗರ್ಭವು ಹೊಸ ಹೊಸ ಸವಿಗನಸುಗಳ ಹಡೆಯಲಿ...
ಭರವಸೆಯ ಮತ್ತೊಂದು ಹಗಲನ್ನು ಎದುರ್ಗೊಳ್ಳಲು ಎದೆಗೂಡನು ಸಿಂಗರಿಸೋಣ ಕಣ್ಣ ಹೊಳಪಿಂದ...
ಶುಭರಾತ್ರಿ...☺
:::
ಬೆಳಗೆಂದರೆ ಬರೀ ಬೆಳಗಷ್ಟೇ...
ಮತ್ತೇನಿಲ್ಲ...☺
:::
ನಮ್ಮೆಲ್ಲರ ಎದೆಯ ಗರ್ಭಗುಡಿಯ ನಂದಾದೀಪಕೆ ಎಣ್ಣೆ ಸುರಿದು, ಕಣ್ಣ ಕಲ್ಯಾಣಿಯಲಿ ಕಾಲಾಡಿಸುತ ಕೂತ ಕನಸುಗಳಿಗೆ ಹಗಲಲ್ಲೂ ನಗಬಲ್ಲ ಜೀವಜಲವನ್ನು ಈ ಇರುಳು ತುಂಬಿಕೊಡಲಿ...
ಶುಭರಾತ್ರಿ...☺
:::
ಹೂಬುಟ್ಟಿ ಹೊತ್ತು ನಸು ನಾಚಿಕೆಯ ನಗು ಚೆಲ್ಲಿ ನಿಂತ ಹುಡುಗಿ 'ವಸುಧೆ...'
ಅವಳ ಕಣ್ಣಲ್ಲಿ ತನ್ನ ಕನಸ ದುಕಾನು ತೆರೆದು ಕೂತ ಬಳೆಯಂಗಡಿ ಒಡೆಯ 'ರವಿರಾಯ...'
ಬೆಳಗಾಯಿತು - ನನ್ನ ಕಣ್ಣಲೂ ಹೊಸ ಬೆಳಕು...
ಶುಭದಿನ...☺
:::
ಇರುಳ ದಿಬ್ಬದ ಮೇಲೆ ಕನಸುಗಳ ದಿಬ್ಬಣ ಸಾಲು...
ಎಲ್ಲಿಂದಲೋ ಹೊರಟು ನನ್ನೆದೆಯ ಬೀದಿಗೇ ಬರುತಿರುವಂತಿದೆ...

ನಲ್ನುಡಿಗಳೆಲ್ಲ ಮೆಚ್ಚಿಗೆಯಾದವು.
ReplyDelete<3 <3
ReplyDeleteಎಂದಿನಂತೆ ಚಂದ ಮತ್ತು ಚಂದ ಮಾತ್ರವೇ :)