Saturday, April 14, 2018

ಗೊಂಚಲು - ಎರಡ್ನೂರೈವತ್ತಾರು.....

ಬಡಬಡಿಕೆ.....
(ಕೂಡಿಸಿಟ್ಟ ಬಿಡಿಸಾಲು...)


↝↝↝ ಆಗೀಗ ಕಳೆದು ಹೋಗಬೇಕು ಹಂಗಂಗೇ - ಮರೆಯದಂಗೆ ಹುಡುಕಿ ಬರುವ ಮನಸುಗಳ ಹುಡುಕಿಕೊಳ್ಳಲಾದರೂ ಹಾಂಗೆ...
#ಮನದ ದಂಗೆ...


↝↝↝ ಪ್ರತೀ ಬೀದಿಯ ಮುಸ್ಸಂಜೆ ಮಬ್ಬು ಮೂಲೆಯಲಿ ಅಪ್ರಾಪ್ತ ಇಲ್ಲವೇ ಅತೃಪ್ತ ಕಾಮವೊಂದು ತನ್ನ ಹೆಣವ ತಾನೇ ಕಂಡು ಅಳುತ್ತಿರುತ್ತದೆ - ಪ್ರೇಮದ ಹೆಸರಿನಲ್ಲಿ...
#ಮಳೆಯಲ್ಲಿ_ನೆನೆವಾಗಲೆಲ್ಲ_ಮಂಗ_ಮನೆಯ_ಕನಸು_ಕಂಡಂತೆ...


↝↝↝ ನಮ್ಮ ನೆರೆಳು ನಮಗೆ ನೆರಳಾಗುವುದಿಲ್ಲ...


↝↝↝ ಎದೆಯ ಬಗ್ಗಡದ ನೀರೊಂದಿಗೆ ಕಣ್ಣ ಪಾಪೆಯಲಿ ಕಾದಿಟ್ಟ ನಗೆಯ ಕಣಗಳು ಕೂಡ ಒಂದೆ ಬಣ್ಣದ ನೀರಾಗಿ ಕೆನ್ನೆ ತೋಯಿಸುವಾಗ ಮುಚ್ಚಿಟ್ಟದ್ದೇನು ಬಿಚ್ಚಿಟ್ಟದ್ದೇನು - ಏನ ಭಂಗಿಸಿ ಏನ ಹಂಗಿಸಿದೆ...


↝↝↝ ಅರ್ಧ ಸತ್ಯ, ನಿತ್ಯ ಅತೃಪ್ತಿಗಳೇ ಇಲ್ಲಿಯವೆಲ್ಲವೂ ಮತ್ತು ಈ ನಿತ್ಯ ಸತ್ಯಗಳೇ ಬದುಕಿನ ವೈವಿಧ್ಯತೆಯ ಹಾಗೂ ಸೌಂದರ್ಯದ ನಿಜ ಮೂಲ ಅನ್ನಿಸುತ್ತೆ...!!


↝↝↝ ಬೆಂಕಿಗಿಟ್ಟ ಹೆಣದ ನೆತ್ತಿ ಸಿಡಿದ ಸದ್ದು ಹುಟ್ಟಿಸಿದ ನೀರವದಲ್ಲಿ ಹುಟ್ಟಿನ ಗುಟ್ಟು ಒಡೆದಂತೆನಿಸಿ ಸಾವಿನ ಸನ್ನಿಧಿಯಲ್ಲಿ ಬದುಕಿನ ಭವ್ಯತೆ ಕಂಡದ್ದು ನನ್ನ ಹುಚ್ಚಿರಬಹುದಾ...!!!


↝↝↝ ಚಂದ್ರನೂರ ಸೂಜಿಗಲ್ಲು ವಕ್ಷ ಶೃಂಗ - ಸುಖಾಗ್ನಿ ಮಡು ಯೋನಿ ಸುಳಿ - ವಿಜೃಂಭಿತ ವೀರ್ಯದ ಉರಿ ಕಮಟು - ಅತೃಪ್ತ ಕನಸಲ್ಲೂ ಒಂದು ತೃಪ್ತ ಸ್ಖಲನ...
#ಬದುಕ_ಮೈಮಾಟ...  

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment