Saturday, April 21, 2018

ಗೊಂಚಲು - ಎರಡ್ನೂರೈವತ್ತೇಳು.....

ಸಾವು : ಬದುಕಿನ ಹಾದಿ.....  

ಕೋಗಿಲೆ ಮರಿಯ ಅಳುವನೂ ಇಂಚರ ಅಂದವರು ಕಾಗೆಯ ಲಾಲಿಯ ಹೊಗಳಿದ ದಾಖಲೆ ಇಲ್ಲ...
#ಪ್ರೀತಿಗೂ_ದನಿಯ_ಇಂಪಿನ_ಮೋಹ...
#ನೋವನೂ_ನಗೆಯ_ಹರಿವಾಣದಲೇ_ತೆರೆದಿಡಬೇಕು...
↯↯↯↺↻↯↯↯

ಒಳಗೆ ನಗು ಸತ್ತ ಘಳಿಗೆ ಮೊಗದಿ ಸಾವಿನ ಕಳೆಯ ಕಾಡಿಗೆ... 
#ಮೊಗವು_ಮನದ_ಕನ್ನಡಿ...
↯↯↯↺↻↯↯↯

ಹೇಗಿದೀಯಾ ಅಂದ್ರೆ........... ಬದ್ಕಿದ್ದೀನಿ...................  ಅಷ್ಟೇ.......... ಮತ್ತೇನಿಲ್ಲ..... ಉಸಿರ ಭಾರಕ್ಕೆ ಎದೆ ತುಸು ಬೀಗಿ ಬಿಗಿದಂತಿದೆ..... ಅಷ್ಟೇ ಅಷ್ಟೇ....🙂
↯↯↯↺↻↯↯↯

...........ನಿದ್ದೆಗಾದರೂ 'ಬದುಕಿನ' ಕನಸು ಬರಬಾರದೇ - ಕನಸಿಗಾದರೂ ಮುಟಿಗೆ ನಗೆ ಮುಗುಳ ಸುರಿಯಬಾರದೇ............
#ಹಸಿವೆಂದರೆ_ಅನ್ನವೊಂದೇ_ಅಲ್ಲ...
#ಅನ್ನವೆಂದರೆ_ಹೊಟ್ಟೆಯ_ಹಿಟ್ಟೊಂದೇ_ಅಲ್ಲ...
↯↯↯↺↻↯↯↯

ಸಾವಿಗೆ ಕಾಯುವ ಕಾಯಕ - ಬರದೇ ಬರಿದೇ ಕಾಡುವ ಪ್ರೇರಕ.....
ಭಯವೇನಿಲ್ಲ ಬದುಕ ನಡೆಯೆಡೆಗೆ - ಸುಸ್ತಾಗಿದೆ ಅದರ ಬೇಗೆಗೆ....... ಅಷ್ಟೇ......
#ಅವಳು
#ನನ್ನ_ಮಾತನ್ನೂ_ಆಡುತ್ತಾಳೆ...
↯↯↯↺↻↯↯↯

ಹೆಣವೊಂದು ದೊಡ್ಡ ನಗೆಯೊಂದಿಗೆ ನಿರಂತರ ಜೀವಿಸುವಿಕೆಯ ಭಾಷಣ ಮಾಡುತ್ತದೆ...
#ನಾನು...
↯↯↯↺↻↯↯↯

ದವಾಖಾನೆಯ ಕೋಣೆ ತುಂಬಿದ ಹಳದಿ ಹಳದಿ ಮಂಕು ಮಂಕು ಬೆಳಕು ಒಂದೇ ಹೊತ್ತಿಗೆ ನೋವಿಗೂ ನಗುವಿಗೂ ತನ್ನ ಉತ್ತರ ನಿರಾಮಯ ನಿರ್ಮಮ ಮೌನವಷ್ಟೇ ಎಂಬಂತೆ ತಣ್ಣಗೆ ಮಿನುಗುತ್ತೆ...
#ನಿರ್ಲಿಪ್ತಿ... 
↯↯↯↺↻↯↯↯

ಖುಷಿಯಾಗಿದೀನಿ........ ಖುಷಿಯಾಗಿರ್ತೀನಿ........ ಖುಷಿಯಾಗೇ ಹೋಗ್ತೀನಿ....... ಅಷ್ಟೇ.....ಎನ್ನೆದೆಯ ಗೂಡಿಗೆ ಕನ್ನ ಕೊರೆದರೆ ನಿಮಗೂ ಖುಷಿಯೇ ಸಿಗಲಿ.......☺
#ಸಾವೆಂಬೋ_ಬದುಕಿನ_ಚಡಪಡಿಕೆಯ_ಮುಖ್ಯ_ಹಾದಿ 


*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment