Wednesday, April 4, 2018

ಗೊಂಚಲು - ಎರಡ್ನೂರೈವತ್ತೈದು.....

ಸಾಲು ಸಾಲು ಅಪಶಬ್ದ..... 

ನಾನಾ ವಿಧದ ವಿಸರ್ಜನೆಗಳ ಸುಖ ಹಾಗೂ ಸುಖದ ಪರಿಣಾಮಗಳಿಗೆ ಎಷ್ಟೆಲ್ಲಾ ಚಂದದ ಶುದ್ಧ ರಂಗಿನ ಹೆಸರುಗಳು: ಹುಟ್ಟು - ಭಾವ - ಬದುಕು - ಸಾವು ಮತ್ತು ಇತ್ಯಾದಿ ಇತ್ಯಾದಿ ಉಪಾಂಗಗಳು...
#ಆತ್ಯಂತಿಕ_ಸುಖಗಳೆಲ್ಲ_ವಿಸರ್ಜನೆಗಳಲ್ಲೇ_(!?)...
↫↴⇱⇲↵↬

ಕೇಳಿಸ್ತಾ -
....... ಉದ್ದೇಶಗಳಿಲ್ಲದ ಜೀವಿತ ಉದ್ದವಾದಷ್ಟೂ ಉಪ್ಪುಪ್ಪು......
ಎಲ್ಲರನ್ನೂ ಪ್ರೀತಿಸ್ತೇನೆ ಹಾಗಾಗಿ ಯಾರನ್ನೂ ಪ್ರೀತಿಸಲಾರೆ ಅಥವಾ ಯಾರ ಪ್ರೀತಿಯೂ ಆಗಲಾರೆ.......
ಇಲ್ಲಿ ಪ್ರೀತಿಯೆಂದರೆ ಬೇಲಿಯೊಳಗಿನ ಹೂವು - ಹಾಗಾಗಿ ಪ್ರೀತಿ ಬಯಲ ಗಂಧವೆಂದವನು ಕ್ಷುದ್ರ ಜೀವಿ......
ಆದರೂ ........ ಹರಿಯುತ್ತಿರಬೇಕು....... ಇಲ್ಲಾಂದ್ರೆ............... ಹೊರಟುಬಿಡಬೇಕು..... ಅಷ್ಟೇ......
#ಒಂಚೂರು_ಹುಚ್ಚು_ಬಡಬಡಿಕೆ...
#ನಾನು...
         ____ವಿವರ ಗೊತ್ತಿಲ್ಲದ ಸಾಲುಗಳು...
↫↴⇱⇲↵↬

ತುಡಿತ ಮಿಡಿತದ ಕುಸುರಿಯ ನವಿರು ಹೊರೆಯಾಗಿ ಭಾವದ ನೆರೆ ಏರಿದಷ್ಟೇ ವೇಗವಾಗಿ ಇಳಿಯುವ ಪರಿಯೆಂತು..!!??
ಅಥವಾ ಏರಿದ ವೇಗವೇ ಇಳಿವಿಗೂ ಕಾರಣವಾ...!!??
ಬಿದ್ದ ಮಳೆ ನೆಲದಲಿ ಇಂಗಿ ಝರಿಯಾಗಿ ಹರಿಯದೇ ನೆರೆಯಾದಂತೆ...
ಅಂಥ ನೆರೆ ಇಳಿದ ಮೇಲಣ ಪ್ರಕ್ಷುಬ್ಧ ಮೌನಕೂ ಎದೆ ಕೊಡುವ ರೈತಾಪಿ ವ್ಯವಧಾನವ ಎಲ್ಲಿಂದಲೋ ಹೆಕ್ಕಿ ತಂದು, ಮೌನದ ಗೋಡೆ ಬಿರುಕಿನ ಗೂಡಲ್ಲಿ ನಗೆಯ ಮೊಟ್ಟೆಯಿಡಲು ಹವಣಿಸುವ ವಿಕ್ಷಿಪ್ತ ಮಾತು ನಾನು...
ನಿನ್ನೊಳಗಿನ ನಿನ್ನ ಮೌನ ಗುಡಿಯ ಹಾಡು - ನನ್ನೊಡನೆಯ ನಿನ್ನ ಮೌನ ಒಡೆದ ಗೂಡು...
↫↴⇱⇲↵↬

ಹೊರಗೆಲ್ಲ ಭ್ರಾಂತು - ಒಳಗೆಲ್ಲ ಬಣ ಬಣ...
ಆದರೂ ಹುಚ್ಚನ ನಗುವಲ್ಲಿ ಹುಳುಕಿಲ್ಲ ಕಾಣಾ...
............ಬದುಕು ದಕ್ಕದವನಿಗೆ ಸಾವೇ ಸಂಭ್ರಮ............. ನಗೆಯ ಸಾಕಿಕೊಂಡವನಿಗೆ ಸಾವೂ ಸಂಭ್ರಮ.........
#ನಾನು...
#ಉಳಿದಂತೆ_ಎಲ್ಲ_ಕುಶಲ_ಸಾಂಪ್ರತ...
          __ವಿವರ ಗೊತ್ತಿಲ್ಲದ ಸಾಲುಗಳು...
↫↴⇱⇲↵↬

'ಕೋಟೆ' 'ಕೋಟೆ'ಗಳ ನಡುವೆ ಸೇತುವೆಯೇ ಯುದ್ಧದ ಸಾರಥಿ... ಗೋಡೆ ಒಡೆಯಲನುವಾದವನು ಶಾಂತಿ ವಿರೋಧಿ...
#ಮಾತಾಡೋನೇ_ಮಹಾ_ಪಾಪಿ...
#ಸಂಬಂಧಗಳು_ಮತ್ತು_ಬಣ್ಣದ_ಪರದೆಗಳು...
↫↴⇱⇲↵↬

ನಾ ಪೊರೆಯದೇ, ಅವ ತೊರೆದನೆಂದು ನೋಯುವೊಲು.........
#ನನ್ನ_ನಾ_ಕಾಣ_ಬಯಸದ_ಕಣ್ಣು...
#ನಾನು...
↫↴⇱⇲↵↬

ಒಡೆದ ಕೈಯ್ಯ ಕೊಳಲು - ನಂಜೇರಿದ ಉಸಿರು - ಎದೆ ನೆಲದ ತುಂಬಾ ಮುಳ್ಳು ಜಾಲಿಯ ಬೀಜ ಬಿರಿದು ಕುಂತಿದೆ...
ಹಸಿ ಹಸಿರು ನೆರಳು ತುಳಿಯದ ಕಲ್ಲು ಹಾದಿಯ ಬಿಸಿಲು ಜೀರ್ಣವಾಗದೇ ಕರುಳು ಸೋತಿದೆ...
ಕಣ್ಣಂಗಳವ ತುಳಿತುಳಿದು ಎಬ್ಬಿಸದಿರಿ ದುಃಸ್ವಪ್ನಗಳೇ ನಿದ್ದೆ ಬೇಕಿದೆ - ಬೆಳಕೂ ತಲುಪದಂತ ನಿದ್ದೆ ಬೇಕಿದೆ...
#ಹಾಂ_ಪ್ರೀತಿಯ_ಹೊತ್ತು_ಸಾಗಲಾಗದ_ಸೋಲಿಗಿಷ್ಟು_ವಿಶ್ರಾಂತಿ_ಬೇಕಿದೆ...
↫↴⇱⇲↵↬

ಎಲ್ಲ ಸರಿ ಇದೆ ಅನ್ನೋ ಭ್ರಮೆಯ ನಂಬುವುದರಲ್ಲಿ ಎಲ್ಲಾ ಸುಖವೂ ಇದೆ......
#ಗೆಲುವು... 
↫↴⇱⇲↵↬

ಸುಳ್ಳು ನುಡಿಯಲ್ಲ - ಸತ್ಯವನ್ನ ಆಚೆ ಬಿಡಲ್ಲ - ನಾಲಿಗೆಯ ಪಾರುಪತ್ಯದಲಿ ಶಬ್ದಗಳಿಗೆ ಬಣ್ಣ ಬಳಿದು ಜಾಣ ಕುರುಡರ ಸಂತೆಯಲಿ ಸಭ್ಯತೆಯ ಮೆರೆಯುವುದು - ಕದ್ದು ತಿನ್ನೋ ಆಸೆಗೆ ಬಚ್ಚಿಟ್ಟು ಕಾಯೋದು - ಅಷ್ಟಾಗಿಯೂ ನೀಗದ ಬಯಕೆಗಳ ಅತೃಪ್ತ ಚಡಪಡಿಕೆ - ಪೊಳ್ಳು ನಗೆಯಲ್ಲಿ ಕಳ್ಳ ಹಾದಿಯ ಸವಿಯೋ ಭಂಡ ಬದುಕು - ತಿರುಕನೂರಿನ ಮುರುಕು ಗದ್ದುಗೆ........
#ನಾನು_ನನ್ನದು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment