ಬೆಳಕಿನ ಮಣಿಗಳ ಮಂಗಳ ಮಡಿಲು..... 🌱
ಬೆಳಕಲ್ಲಿ ಮಿಂದು ಮಡಿಯಾದ ಹಗಲು, ಶುಭವನ್ನೇ ನುಡಿದು ಉಡಿ ತುಂಬುವಾಗ... 🌱
ನಗೆಯಾಗಿ ಹೊಮ್ಮಲಿ ಕನಸು...
ಶುಭದಿನ... 🍬
🌱🌱🌱
ಎದೆ ಬಾಗಿಲ ತುಳಿದ ಕರುಣ ಬೆಳಕು ಶುಭದ ಶಕುನವ ಹಾಡಲಿ... 🌱
ಶುಭದಿನ... 🍬
🌱🌱🌱
ಅಬ್ಬೊಲೆಯ ಬೂದಿಯಲಿ ಬೆಚ್ಚಗೆ ಮಲಗಿದ್ದ ಪಾಂಡು ಕುನ್ನಿಯ ಪ್ರೀತಿಯಿಂದ ಬೈಯ್ಯುತ್ತಲೇ ಹೊಸ ಹಗಲಿಗೆ ಮುಡಿ ಕಟ್ಟುತ್ತಾಳೆ ಅಬ್ಬೆ...
ಮಮತೆ ಮಡಿಲ ತುಂಬಾ ಕಾರುಣ್ಯದ ಬೆಳಕು...
ಶುಭದಿನ...🍬
🌱🌱🌱
ನೂರು ಅನುಭಾವಗಳ ಪುಟ್ಪುಟಾಣಿ ದಂಡೆ ಕಟ್ಟುವ ನಾರು ಬೆಳಗು... 💐
ಬೆಳಕಿನ ಮಣಿಗಳ ಮಂಗಳ ಮಡಿಲು... 🫂
🌱🌱🌱
ಮಗುವಿನ ಮೈತೊಳೆದು, ಒಪ್ಪಮಾಡಿ ಅಲಂಕರಿಸಿ, ದೃಷ್ಟಿ ಬೊಟ್ಟಿಟ್ಟು ನಟಿಗೆ ಮುರಿದು, ಕುಂಡೆಯ ತಾಡಿಸಿ ಮಂದಹಾಸವ ಬೀರಿ, ಆಡಲು ಬಿಡುವ ಮುದ್ದು ಅಮ್ಮನಂತೆಯೇ ಈ ಹಗಲು - ಕನಸುಗಳ ಮಟ್ಟಿಗೆ...
ಶುಭದಿನ... 🦋
🌱🌱🌱
ಸರಸರ ಓಡಾಡಿ ಕತ್ತಲನು ಗುಡಿಸುತ್ತಾ ಸುತ್ತೆಲ್ಲಾ ಜಗಕೂ ಎಚ್ಚರವ ತುಂಬುವ ಗಡಿಬಿಡಿಯ ಯಜಮಾನಿ ಈ ಬೆಳಗು... 🌤️
🌱🌱🌱
ಹಗಲಾಯಿತು...
ನಗೆಯ ಹೆಗಲೇರಲಿ ಬೆಳಕು... 🤡
🌱🌱🌱
ಅಲ್ಲೆಲ್ಲೋ ಎದುರು ಬದುರಾದ ಬೆಳಕೂ, ಕನಸೂ ಹೆಗಲು ಹೆಗಲನು ಬಳಸಿ ಮೋದದಿ ಮಾತಾಡಿಕೊಂಡು ಒಂದೇ ಹಾದಿಯ ಹಿಡಿದವಂತೆ...
ಆಹಾ!! ಪ್ರಾರ್ಥನೆಯು ಫಲಿಸಿ, ಎಂಥ ಅನುಭಾವ ಅಂಥ ಬೆಳಗು...
ಬೆಳಗೆಂಬ ಅಭಿರಕ್ಷೆ... ❤🩹
🌱🌱🌱
ಹೊಸಿಲನಲಂಕರಿಸಿದ ಬೆಳಕಿನ ಕಿಡಿಗಳ ರಂಗೋಲಿ - ಹೊಸತೇ ಇದು ಈ ಬೆಳಗು... 🌾
ಬೆಳಕುಂಡು ಬೆಳೆಯಲಿ ಕನಸು... 🌱
🌱🌱🌱
ಬೆಳಗೆಂಬುದು ತೊಳೆದಿಟ್ಟ ಅಚ್ಚರಿಗಳ ಸಂತೆ ಮಾಳ... 🦋🌄🐚
🌱🌱🌱
ಬೆಳಗು ಬೆಳಕ ಬಿತ್ತುವಾಗ ರುದಯ ಕೊರಳೆತ್ತಿ ಹಾಡಲಿ ಪ್ರೇಮವ... 🤝🫂
🌱🌱🌱
ಬೆಳಗೆಂದರೆ ಖುಷಿಯ ಕುರುಹಾಗಿ ಬೇಕಂತಲೇ ಕರೆದು ಎರೆದುಕೊಳ್ಳುವ ನಿನ್ನ ನವಿರು ನೆನಪು... 🍬
ಬೆಳಗೆಂಬ ಜೀವಪ್ರೀತಿಯ ಸಾರಥಿ... 🌱
🌱🌱🌱
ಕಣ್ಣುಜ್ಜಿಕೊಂಡು ಎದ್ದು ಕುಳಿತ ಹೊಸತೆನಿಸೋ ನಗುವಿಗೆ ಹಳೇ ಪರಿಚಯವೆಂಬಂತೆ ಹಾಯ್ ಅಂಬೋ ಉದಯ ರಾಗ ಬೆಳಗು... 🤝🫶🏼🫂
ಒಂದು ಮರುಹುಟ್ಟಿನಂತಾ ನಗು ಬೆಳಗು... ☺️
🌱🌱🌱
ಬೆಳಗೆಂಬೀ ಶುಭದ ಬೆಳಕಿನ ಸೌಂದರ್ಯ ಸಿರಿ ಜಾಲ - ಎದೆಗಿಳಿದಷ್ಟೂ ನನ್ನದು... 🌱🦋
ಹೊಳೆ ಹೊಳೆದು ಸೋನೆ ಸುರಿವ ಬೆಚ್ಚ ಬೆರಗಿನ ಬೆಳಕ ಮಳೆ... 🍬🌱
🌱🌱🌱
ಅಷ್ಟು ಇಂಪಿನ ರಾಗಾಲಾಪ...!!
ಗೋಪಿ ಹಕ್ಕಿಯ ಮುಂಬೆಳಗಿನ ಕುಕಿಲದು ಶುಭದ ಸಂಯೋಜನೆಯೇ ಇರಬೇಕು... 🌱
ಶುಭದಿನ... 🍬
🌱🌱🌱
ಆಕಳಿಸುವ ಆಲಸಿ ಮೈಮನಸಿಗೆ ಬೆಳಕೆಂದರೆ ಹಿತ್ತಲ ಮದ್ದು... 🌱
ಬೆಳಗಾಯಿತು... 🍬
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)
ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ... ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ...
Wednesday, May 1, 2024
ಗೊಂಚಲು - ನಾಕ್ನೂರಿಪ್ಪತ್ತೆಂಟು.....
Subscribe to:
Post Comments (Atom)
No comments:
Post a Comment