Wednesday, May 1, 2024

ಗೊಂಚಲು - ನಾಕ್ನೂರಿಪ್ಪತ್ತೊಂಭತ್ತು .....

ಬೆಳಗೆಂಬ ಕನ್ನಡಿಗೆ ಹೇಳಿದ ರೆಕ್ಕೆ ದನಿಯ ಹಾಯ್..... 🕊️

ಇರುಳು ಬಿತ್ತಿದ ಕನಸಿಗೂ ಉಸಿರ ಶಕ್ತಿಯ ಸುರಿವ ಬೆಳಕು - ಬೆಳಗು...
ಶುಭದಿನ... 🎍 
🎍🎍🎍 

ಹೂವಿನ ಕೆನ್ನೆ ತಟ್ಟಿ ದುಂಬಿ ಹೇಳಿದ ಸುಪ್ರಭಾತ - ಬೆಳಕಿನ ಕರುಳ ಕರುಣೆಯ ಹಾಡು...
ಊರ ಉಸಿರ ತುಂಬಾ ಪ್ರೀತಿ ಗಂಧ ಹರಡಲಿ...
ಶುಭದಿನ... 🌻🦋
🎍🎍🎍

ನನ್ನ ಕನಸಿಗೆ ತನ್ನ ಪ್ರೀತಿ ಶಕ್ತಿಯ ಸುರಿದು ನಗೆಯ ಹರಸುವ ಅಮ್ಮನಂಥಾ ಆಪ್ತ ಬೆಳಗು...
ಶುಭದಿನ ಸ್ನೇಹವೇ... 🫂
🎍🎍🎍

ಆಕಳಿಕೆ ಮೆತ್ತಿದ ಆಳ್ಸಿ ಬೆಳಗು... 😴🥱
ಶುಭದಿನ... 🍬
🎍🎍🎍

ಕಾಲನ ಚದುರಂಗದಲಿ ಒಂದು ನಡೆ ನಗುವಿನೆಡೆಗೆ - ಉಸಿರಿನ ಮುನ್ನಡೆಯಂತೆ ಮತ್ತೆ ಬೆಳಗಾಯಿತು...
ಶುಭದಿನ... 🪻🍬
🎍🎍🎍

ಎಲ್ಲಾ ಸೋಲು, ನೋವಿನುರಿಯ ಮರೆಸುವ ದುಡಿದುಣ್ಣುವ ಕಾಯಕ ಭಾವ ಬೆಳಕು - ಬೆಳಗು...
ಶುಭದಿನ... 👷
🎍🎍🎍

ಎನಗೂ, ನಿನಗೂ, ಎಲ್ಲರಿಗೂ
ಉಚಿತ ಖಚಿತ ಈ 'ಬೆಳಗು' ... 🥳
ಶುಭದಿನ... 🪻
🎍🎍🎍

ವಸುಧೇ -
ಧ್ಯಾನಿ ನಾನು - ನಿನ್ನೆತ್ತರದ ಚೆಲುವು ಈ ಕಣ್ಣಲ್ಲಿ ಭಾವಕಾವ್ಯದ ಹಾಡಾಗುವಾಗ... 😍
ನಿನ್ನಿಂದ - ಶಬ್ದ ಸೋಲುವ ಎದೆಯ ಹಾಡು...
ಚಿಟ್ಟೆ ತುಟಿಗಂಟಿದ ಹೂವೆದೆಯ ನಾಚಿಕೆಯ ರಂಗು, ಗುಂಗು... 💞
_____ ಕಳೆದೂ ಉಳಿದ ನಿನ್ನೆ... 🥰
🎍🎍🎍

ಭ್ರಮರದ ಕರುಳಿನಾಳದ ಜೇನ ಹಸಿವು - ಕನಸು ಮೈದುಂಬಿ ಅರಳೋ ಹೂವು...
ಹೂ ಹಕ್ಕಿ ಸಲ್ಲಾಪ ಬೆಳಗು...
ಬೆಳಗೆಂಬ ಬೆಳಕಿನ ಹೊಸ ಸಂಭಾಷಣೆ... 🫂🪻🦋🐾
🎍🎍🎍

ಹಗಲೆಂದರೆ ಹಾಗೆ ಸಾಗುವ ನಗುವಿನೂರ ಹಾದಿಯ ಸಣ್ಣ ಕವಲಿಗೂ ಭರವಸೆ ಎಂತಲೇ ಹೆಸರಿಟ್ಟು ಹರಸಿದ ಬೆಳಕೇ ಬೆಳಕು... 🪻🦋
ಬೆಳಗೆಂಬ ಕನಸ ಹಾದಿಯ ದೊಂದಿ... 🦋
🎍🎍🎍

ಇರುಳು ಕಾವು ಕೊಟ್ಟ ಕನಸಿಗೆ ಹಗಲು ರೆಕ್ಕೆ ಕೊಡಬಹುದು... 🌱
ಹಗಲೆಂಬ ಬೆಳಕಿನೊಲುಮೆಯ ಓಲಗ... 🦋
🎍🎍🎍

ಹೊಸ ಸಾಧ್ಯತೆಯೊಂದು ಹೊಸಿಲ ತುಳಿದಂತೆ ಬೆಳಕ ಕೋಲೊಂದು ಒಳತೂರಿ ಬೆಳಗಾಯಿತು... 🧚
ಶುಭ ನುಡಿಯಲಿ ಬೆಳಕಿನ ಬಿಳಲು... 🌱
🎍🎍🎍

ಕತ್ತಲ ಹುಡಿಗಳನೆಲ್ಲ ಗುಡಿಸಿ ಮೂಲೆಗೊತ್ತಿ ಬೆಳಗು ರಾಜ್ಯಭಾರ ಮಾಡುವ ಹೊತ್ತು...
ಬೆಳಕಾಗಲಿ ಎದೆಯ ಮನೆ... 
ಬೆಳಗೆಂಬೋ ಬೆಳಕಿನ ಗರಡಿಮನೆ... 😊
🎍🎍🎍

ಶುಭವೆಂದರೆ ನಿನ್ನ ನಗು ಮತ್ತು ಆ ನಗೆ ಮಿಂಚಿನ ಬೆಳಗು... 😊
ಬೆಳಗೊಂದು ಕನಸಿನ ಕವಿತೆ...🪻🪶
🎍🎍🎍

ಮುಂಬೆಳಗಿನ ಕನಸ ಮೈತುಂಬಾ ನಾನೇ ಬರೆದ ನಿನ್ನ ಹೆಸರು...
ನಿದ್ದೆ ಇಳಿಯದ ತೇಲುಗಣ್ಣಿನ ಬೆಳಗು - ಸವಿಸುಖದಿ ಮೈಮುರಿವ ಹಿತವಾದ ಎಚ್ಚರ...
ಶುಭದಿನವೇ ಇದು... 😊
🎍🎍🎍

ನೆಲಕೆ ಬಿದ್ದ ಬೆಳಕ ಹುಡಿಯೆಲ್ಲ ಹಸಿರಾಗಿ ಕುಡಿಯೊಡೆವ ಚೆಲುವು... ಬೆಳಗಾಯಿತು... 🪻🌳
ಬೆಳಗೆಂದರೆ ಒಡಲಾಗ್ನಿಗೆ ಬೆಳಕಿನ ಅಲಂಕಾರ... 🌦️
🎍🎍🎍

ಶುಭಕೆಂದೇ ತೆರೆದ ಬಾಗಿಲು - ಬೆಳಗು... 🍬💐
ಬೆಳಗೆಂಬ ಒಲವ ದೀಪ... 🌱
🎍🎍🎍

ಕಾಡು ಕೋಳಿ ಬೆಳಗಿನ ಶಕುನ ಹೇಳುತಿದೆ - ಕೇಳು ಎದ್ದೇಳು... 🐥
ಬೆಳಕು ರೆಕ್ಕೆ ಬಡಿದು ಶುಭವ ಹಾಡಲಿ... 🌤️
🎍🎍🎍

ಹಗಲಾಯಿತು - ಎದ್ದು ಕನಸ ತೇರಿಗೆ ಹೆಗಲು ಕೊಡಿ... 🫀🧚🧞
ಬೆಳಗೆಂಬ ಬೆಳಕಿನುತ್ಸವ... 🎉


*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment